ಏಪ್ರಿಲ್ 9 ರಂದು ಬೆಳಗ್ಗೆ 10 ಗಂಟೆ ಖ್ಯಾತ ವಿಮರ್ಶಕ ಪ್ರೊ.ಜಿ ಎಸ್ ನಾಯಕ ಕಾರ್ಯಕ್ರಮ ಉದ್ಘಾಟಿಸುವರು. ನಿವೃತ್ತ ನ್ಯಾಯಮೂರ್ತಿಗಳು ಹಾಗೂ ಚಿಂತಕರು ಆಗಿರುವ ಎ ಜೆ ಸದಾಶಿವ, ರಾಜೇಶ್ವರಿ ತೇಜಸ್ವಿ, ಭಾರತ್ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಸಿ ಎಂ ಪ್ರಸಾದ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಪ್ರೊ. ವಿ ವೆಂಕಟಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
- ಮಧ್ಯಾಹ್ನ 12 ಗಂಟೆ ಮೊದಲ ಗೋಷ್ಠಿ ನಡೆಯಲಿದೆ. ವಿಮರ್ಶಕ ನಟರಾಜ್ ಹುಳಿಯಾರ್ ಅಧ್ಯಕ್ಷತೆ ವಹಿಸುವರು. ತೇಜಸ್ವಿ ಕೃತಿಗಳಲ್ಲಿ ವೈಜ್ಞಾನಿಕ ಪರಿಕಲ್ಪನೆಗಳ ನಿರ್ವಹಣೆ ವಿಷಯದ ಮೇಲೆ ಡಾ ಕೆ ಪುಟ್ಟಸ್ವಾಮಿ ಮಂಡಿಸಲಿದ್ದಾರೆ. ತೇಜಸ್ವಿಯವರ ಮಿಲೇನಿಯಂ ಸರಣಿಯ ಓದು ಕುರಿತು ಡಾ ಕೆ ಶಿವಾರೆಡ್ಡಿ, ಕುವೆಂಪು ತೇಜಸ್ವಿ ತಾತ್ವಿಕ ಮಾದರಿಗಳು ಕುರಿತು ಡಾ ಎಂ ಎಸ್ ಆಶಾದೇವಿ ವಿಚಾರ ಹಂಚಿಕೊಳ್ಳಲಿದ್ದಾರೆ.
